ಮುಂದ...ಉತ್ತರ ಕರ್ನಾಟಕವನ್ನು ಸಮರ್ಥವಾಗಿ ಬಿಂಬಿಸಿದ್ದು ರಾಮ ಶ್ಯಾಮ ಭಾಮ ಚಿತ್ರದ ಕಮಲ್ ಹಾಸನ್ ಹೇಳುವ ಈ ಡೈಲಾಗ್. ಈ ಚಿತ್ರದ ಸಂಭಾಷಣೆಯ ಜವಾಬ್ದಾರಿ ಹೊತ್ತಿದ್ದ ಯಶವಂತ ಸರದೇಶಪಾಂಡೆಯವರ ಹಾಸ್ಯ ಪ್ರಜ್ಞೆಯ ಸಾಕ್ಷಿ ಈ ಸಂಭಾಷಣೆ. ಈ ಚಿತ್ರದ ಮೂಲಕ ಕಮಲ್ ಹಾಸನ್, ನಿರ್ದೇಶಕ, ನಟ ರಮೇಶ್ ಹಾಗೂ ಕರುನಾಡ ಜನತೆಯ ಮನ ಗೆದ್ದ ಯಶವಂತ ಕಳೆದ ೨೫ ವರ್ಷಗಳಿಂದ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಸ್ಯ ನಾಟಕಗಳ ಮೂಲಕ ಜನರನ್ನು ನಗಿಸಿರುವ ಯಶವಂತ ಈಗ ಚಿತ್ರ ನಿರ್ದೇಶಕರಾಗಿದ್ದಾರೆ. ಐಡ್ಯಾ ಮಾಡ್ಯಾರ ಅವರ ಚೊಚ್ಚಲ ನಿರ್ದೇಶನದ ಚಿತ್ರ.
ಆಲ್ ದಿ ಬೆಸ್ಟ್, ರಾಶಿ ಚಕ್ರದಂತಹ ವಿಭಿನ್ನ ಹಾಗೂ ಶುದ್ಧ ಹಾಸ್ಯದ ಮೂಲಕ ಜನರ ಮುಖದ ನಗುವಿಗೆ ಕಾರಣರಾಗಿರುವ ಯಶವಂತರಿಗೆ ಮಕ್ಕಳ ನಾಟಕಗಳೆಂದರೆ ಅಚ್ಚು ಮೆಚ್ಚು. ಈ ಮೊದಲು ನಾಗ್ಪುರದ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದಲ್ಲೂ ಕಾರ್ಯನಿರ್ವಹಿಸಿದ್ದ ಅವರು ಖ್ಯಾತ ನಿರ್ದೇಶಕರಾದ ಟಿ.ಎನ್.ಸೀತಾರಾಂ, ಸಿಹಿ ಕಹಿ ಚಂದ್ರು, ನಾಗೇಂದ್ರ ಶಾ ಹಾಗೂ ಪಿ.ಶೇಷಾದ್ರಿಯವರ ಧಾರಾವಾಹಿಗಳ ಕತೆ ಹಾಗೂ ಸಂಭಾಷಣೆ ಜವಾಬ್ದಾರಿಯನ್ನೂ ನಿಭಾಯಿಸಿದ್ದಾರೆ. ಶೇಷಾದ್ರಿಯವರ ಅತಿಥಿ ಚಿತ್ರದ ಸಹ ನಿರ್ದೇಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಸಿನಿಮಾ, ರೆಡಿಯೋ ಹಾಗೂ ರಂಗಭೂಮಿಯಲ್ಲಿ ಯಶವಂತ ಸಕ್ರಿಯರಾಗಿದ್ದಾರೆ.
ಅಮೃತಧಾರೆ ಸೇರಿದಂತೆ ಹಲವು ಚಿತ್ರಗಳಲ್ಲೂ ನಟಿಸಿರುವ ಯಶವಂತ ಶುದ್ಧ, ಪರಿಪೂರ್ಣ ಹಾಸ್ಯದ ಐಡ್ಯಾ ಮಾಡ್ಯಾರ ನಿರ್ದೇಶಿಸುವ ಮೂಲಕ ಉತ್ತರ ಕರ್ನಾಟಕದ ಭಾಷೆಯನ್ನು ಚಿತ್ರರಂಗದಲ್ಲಿ ಸಕಾರಾತ್ಮಕವಾಗಿಯೂ ಬಳಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
No comments:
Post a Comment