Friday, February 6, 2009

ಮಾಧ್ಯಮಗಳ ವಿಮರ್ಶೆ

the times of india
Theatre activist Yashwant Sirdeshpande has selected an entertaining family story with a tinge of romance and a touch of humour for his directorial debut. Neat narration, controlled sequences and a good script make for a pleasant movie. A highlight is the Dharwad Kannada, effectively used by the leading artistes. http://timesofindia.indiatimes.com/moviereview

deccan herald
The second half is more fluid, with sequences tied in neatly. Some of the situations are indeed very funny.
http://www.deccanherald.com/Content/Feb72009/movies

Thursday, February 5, 2009

ಇಂದು ಬಿಡುಗಡೆ....



ಶುದ್ಧ ಹಾಸ್ಯದ, ಎಲ್ಲರನ್ನೂ ನಗಿಸುವ ಐಡ್ಯಾ ಮಾಡ್ಯಾರ ಚಿತ್ರ ಇಂದು ಶುಭ ಶುಕ್ರವಾರ, ಫೆ.6 ರಂದು ತೆರೆ ಕಾಣಲಿದೆ. ನೋಡಿ, ಹೊಟ್ಟೆ ತುಂಬ ನಗಬಹುದು. ಬೆಂಗಳೂರು, ಮೈಸೂರು, ಬೆಳಗಾವಿ, ಹುಬ್ಬಳ್ಳಿ, ಹಾವೇರಿ ಸೇರಿದಂತೆ ಹಲವೆಡೆ ಚಿತ್ರ ಬಿಡುಗಡೆಗೊಳ್ಳಲಿದೆ.

Monday, January 26, 2009

ಫೋಟೊ ನೋಡ್ರಿ...











ಚಿತ್ರದ ಹಾಡು, ಟ್ರೇಲರ್‌you tube.com ನೋಡಬಹುದು.







ನಿಮ್ಮ ಸಲಹೆ, ಸೂಚನೆಗಳನ್ನು ಇಲ್ಲಿ ಮೇಲ್ ಮಾಡಬಹುದುidyamadyar@yahoo.in
ನೀವೂ ನಗಲಿಕ್ಕೆ ತಯಾರಾಗ್ರಿ, ಫೆಬ್ರವರಿ ತಿಂಗಳಿನಲ್ಲಿ ಥೇಟರ್‌ನಲ್ಲಿ ಕಾಣಿಸಿಕೊಳ್ಳಲಿದೆ ಐಡ್ಯಾಮಾಡ್ಯಾರ...ನಗಲಿಕ್ಕೆ.

ಗುರು ಸಂಸ್ಥೆ



ಹುಬ್ಬಳ್ಳಿಯ ಗುರು ಸಂಸ್ಥೆ ಯಶವಂತ ಸರದೇಶಪಾಂಡೆಯವರ ಕನಸು. ಈ ಸಂಸ್ಥೆಯ ಮೂಲಕ ಹಾಸ್ಯ ನಾಟಕಗಳ ಪ್ರದರ್ಶನ ನಿರಂತರವಾಗಿದೆ. ಮರಾಠಿ ರಂಗಭೂಮಿಯ ಶುದ್ಧ ಹಾಸ್ಯದ ನಾಟಕಗಳನ್ನು ಕನ್ನಡಕ್ಕೂ ಪರಿಚಯಿಸಿದ ಕೀರ್ತಿ ಈ ಸಂಸ್ಥೆಯದ್ದು. ನೋಡೂ ಟೆಕ್ಸ್ಟ್ ಎನ್ನುವ ಹೊಸ ಚಿಂತನೆಯ ಮೂಲಕ ಪಿಯುಸಿ ಪಠ್ಯಗಳನ್ನು ನಾಟಕದ ಮೂಲಕ ವಿದ್ಯಾರ್ಥಿಗಳಿಗೆ ಮುಟ್ಟಿಸಿದ್ದು ಈ ಸಂಸ್ಥೆ. ಏಕಲವ್ಯ ಸೇರಿದಂತೆ ಹಲವು ನಾಟಕಗಳನ್ನು ಸಿಡಿ ಮೂಲಕ ರಾಜ್ಯಾದ್ಯಂತ ಕಾಲೇಜುಗಳಲ್ಲಿ ಪ್ರದರ್ಶಿಸಲಾಗಿದೆ. ಎಂಟಿಆರ್ ಸಂಸ್ಥೆಯ ನೆರವಿನಿಂದ ನಾಟಕಗಳ ಪ್ರದರ್ಶನ ಸಾಧ್ಯವಾಗಿದೆ. ಈ ಸಂಸ್ಥೆಯ ಮೂಲಕ ಹವ್ಯಾಸಿ ಹಾಗೂ ವೃತ್ತಿ ರಂಗಭೂಮಿ ಕಲಾವಿದರಿಗೂ ಅವಕಾಶ ಒದಗಿಸಿದ್ದು ಹೆಗ್ಗಳಿಕೆ.

ಯಶವಂತ ಸರದೇಶಪಾಂಡೆ



ಮುಂದ...ಉತ್ತರ ಕರ್ನಾಟಕವನ್ನು ಸಮರ್ಥವಾಗಿ ಬಿಂಬಿಸಿದ್ದು ರಾಮ ಶ್ಯಾಮ ಭಾಮ ಚಿತ್ರದ ಕಮಲ್ ಹಾಸನ್ ಹೇಳುವ ಈ ಡೈಲಾಗ್. ಈ ಚಿತ್ರದ ಸಂಭಾಷಣೆಯ ಜವಾಬ್ದಾರಿ ಹೊತ್ತಿದ್ದ ಯಶವಂತ ಸರದೇಶಪಾಂಡೆಯವರ ಹಾಸ್ಯ ಪ್ರಜ್ಞೆಯ ಸಾಕ್ಷಿ ಈ ಸಂಭಾಷಣೆ. ಈ ಚಿತ್ರದ ಮೂಲಕ ಕಮಲ್ ಹಾಸನ್, ನಿರ್ದೇಶಕ, ನಟ ರಮೇಶ್ ಹಾಗೂ ಕರುನಾಡ ಜನತೆಯ ಮನ ಗೆದ್ದ ಯಶವಂತ ಕಳೆದ ೨೫ ವರ್ಷಗಳಿಂದ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಸ್ಯ ನಾಟಕಗಳ ಮೂಲಕ ಜನರನ್ನು ನಗಿಸಿರುವ ಯಶವಂತ ಈಗ ಚಿತ್ರ ನಿರ್ದೇಶಕರಾಗಿದ್ದಾರೆ. ಐಡ್ಯಾ ಮಾಡ್ಯಾರ ಅವರ ಚೊಚ್ಚಲ ನಿರ್ದೇಶನದ ಚಿತ್ರ.
ಆಲ್ ದಿ ಬೆಸ್ಟ್, ರಾಶಿ ಚಕ್ರದಂತಹ ವಿಭಿನ್ನ ಹಾಗೂ ಶುದ್ಧ ಹಾಸ್ಯದ ಮೂಲಕ ಜನರ ಮುಖದ ನಗುವಿಗೆ ಕಾರಣರಾಗಿರುವ ಯಶವಂತರಿಗೆ ಮಕ್ಕಳ ನಾಟಕಗಳೆಂದರೆ ಅಚ್ಚು ಮೆಚ್ಚು. ಈ ಮೊದಲು ನಾಗ್ಪುರದ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದಲ್ಲೂ ಕಾರ್ಯನಿರ್ವಹಿಸಿದ್ದ ಅವರು ಖ್ಯಾತ ನಿರ್ದೇಶಕರಾದ ಟಿ.ಎನ್.ಸೀತಾರಾಂ, ಸಿಹಿ ಕಹಿ ಚಂದ್ರು, ನಾಗೇಂದ್ರ ಶಾ ಹಾಗೂ ಪಿ.ಶೇಷಾದ್ರಿಯವರ ಧಾರಾವಾಹಿಗಳ ಕತೆ ಹಾಗೂ ಸಂಭಾಷಣೆ ಜವಾಬ್ದಾರಿಯನ್ನೂ ನಿಭಾಯಿಸಿದ್ದಾರೆ. ಶೇಷಾದ್ರಿಯವರ ಅತಿಥಿ ಚಿತ್ರದ ಸಹ ನಿರ್ದೇಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಸಿನಿಮಾ, ರೆಡಿಯೋ ಹಾಗೂ ರಂಗಭೂಮಿಯಲ್ಲಿ ಯಶವಂತ ಸಕ್ರಿಯರಾಗಿದ್ದಾರೆ.
ಅಮೃತಧಾರೆ ಸೇರಿದಂತೆ ಹಲವು ಚಿತ್ರಗಳಲ್ಲೂ ನಟಿಸಿರುವ ಯಶವಂತ ಶುದ್ಧ, ಪರಿಪೂರ್ಣ ಹಾಸ್ಯದ ಐಡ್ಯಾ ಮಾಡ್ಯಾರ ನಿರ್ದೇಶಿಸುವ ಮೂಲಕ ಉತ್ತರ ಕರ್ನಾಟಕದ ಭಾಷೆಯನ್ನು ಚಿತ್ರರಂಗದಲ್ಲಿ ಸಕಾರಾತ್ಮಕವಾಗಿಯೂ ಬಳಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಐಡ್ಯಾ ಮಾಡಿದವ್ರು...






ತಾರೆಯರು : ಯಶವಂತ ಸರದೇಶಪಾಂಡೆ, ನವ್ಯಶ್ರೀ, ಪೂರ್ಣಚಂದ್ರ ತೇಜಸ್ವಿ, ಸುನೇತ್ರ ಪಂಡಿತ್, ನಾಗೇಂದ್ರ ಶಾ, ಸದಾನಂದ, ಮಾಲತಿ ಸರದೇಶಪಾಂಡೆ, ಅರವಿಂದ ಪಾಟೀಲ್, ಬೇಬಿ ದೋಸ್ತಿ,
ಕತೆ : ಸಚಿನ್ ಮೋಟೆ
ಸಂಗೀತ : ಕಿರಣ ಗೋಡಖಿಂಡಿ
ಕಲೆ :ರಮೇಶ ದೇಸಾಯಿ
ನೃತ್ಯ :ಮದನ್ ಹರಿಣಿ
ಸಾಹಸ : ಅಲ್ಟಿಮೇಟ್ ಶಿವು
ಸಂಕಲನ : ಅನಿಲ್ ನಾಯ್ದು
ತಾಂತ್ರಿಕ ನಿರ್ದೇಶನ : ಕೆ.ಜಗದೀಶ್ ರೆಡ್ಡಿ
ನಿರ್ಮಾಪಕರು : ಯಶವಂತ ಸರದೇಶಪಾಂಡೆ, ಅರವಿಂದ ಪಾಟೀಲ್, ಬಿಕೆಬಿಎನ್ ಮೂರ್ತಿ, ಪ್ರದೀಪ್ ವಿ.ಬಿ.
ಸಾಹಿತ್ಯ, ಸಂಭಾಷಣೆ, ನಿರ್ದೇಶನ : ಯಶವಂತ ಸರದೇಶಪಾಂಡೆ

ಚಿತ್ರದ ಬಗ್ಗೆ






ಮಾಧವ ಭಟ್ಟ , ರಾಧಾಬಾಯಿ ಗಂಡ ಹೆಂಡತಿ, ಮಗಳು ಆಶು ಕಾಲೇಜಿನ ವಿದ್ಯಾರ್ಥಿನಿ. ರಿಕ್ಷಾ ಡ್ರೈವರ್ ಬಾಬುರಾವ್ ಆಶು ಮಧ್ಯೆ ಪ್ರೇಮಾಂಕುರ, ಮದುವೆ. ವಡಾ ಮಾರುವ ವತ್ಸಲಾಬಾಯಿ, ಮಾಧವ ಭಟ್ಟರ ಮಧ್ಯೆ ಅಕ್ರಮ ಸಂಬಂಧವಿದೆ ಎಂಬ ಸಂಶಯದಿಂದ ವತ್ಸಲಾಬಾಯಿ ಗಂಡ ಅರ್ಜುನರಾವ್ ಹೊಡೆದಾಟಕ್ಕೆ ನಿಂತಾಗ ಕೊಲೆಯಾಗುತ್ತಾನೆ. ಮಾಧವ ಭಟ್ಟರ ಮೇಲೆ ಆಪಾದನೆ, ಆಗಾಗ ಪೊಲೀಸರ ಕಾಟ.
ಈ ಮಧ್ಯೆ ಅಣ್ಣಾ ಮಹಾರಾಜರ ಉಚಿತ ಉಪದೇಶ, ಮುಗ್ಧ ಮಗಳು ಪುಟ್ಟಕ್ಕಳ ಯಾತನೆ...ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕಾಗಿ ಚಿತ್ರದ ಪಾತ್ರಗಳು ಐಡ್ಯಾ ಮಾಡುತ್ತಾರೆ....!